ಸಿದ್ಧಾಪುರ: ಬೈಲಳ್ಳಿಯಲ್ಲಿ ಶ್ರೀ ಮಹಾಕಾಲೇಶ್ವರ, ಶ್ರೀ ಗಣಪತಿ, ಶ್ರೀ ಅಮ್ಮನವರ ನೂತನ ಆಲಯ ಮತ್ತು ಧ್ವಜ ಪ್ರತಿಷ್ಠೆ ಕಾರ್ಯದಲ್ಲಿ ಶಾಸಕ ಭೀಮಣ್ಣ ನಾಯ್ಕ ಭಾಗಿ
ಸಿದ್ದಾಪುರ:- ಸಿದ್ದಾಪುರ ತಾಲ್ಲೂಕಿನ ಬೈಲಳ್ಳಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ಮಹಾಕಾಲೇಶ್ವರ, ಶ್ರೀ ಗಣಪತಿ, ಶ್ರೀ ಅಮ್ಮನವರ ನೂತನ ಆಲಯ ಮತ್ತು ಧ್ವಜ ಪ್ರತಿಷ್ಠೆ, ಗೋಪುರ ಕಲಶ ಪ್ರತಿಷ್ಠೆ ಮಹೋತ್ಸವ ಕಾರ್ಯಕ್ರಮದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಭಾಗವಹಿಸಿ, ಶ್ರೀ ದೇವರ ದರ್ಶನವನ್ನು ಪಡೆದು ಆನಂತರ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಭಾನುವಾರ ಸಂಜೆ 6:30 ಗಂಟೆ ಸುಮಾರಿಗೆ ಶಾಸಕ ಭೀಮಣ್ಣ ನಾಯಕ ಅವರನ್ನು ದೇವಸ್ಥಾನದ ಆಡಳಿತ ಸಮಿತಿಯ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ವಿ ಎನ್ ನಾಯ್ಕ ಬೇಡ್ಕಣಿ, ಸಿ ಆರ್ ನಾಯ್ಕ, ಸತೀಶ ಹೆಗಡೆ, ಎನ್ ಟಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.