ಸಿದ್ಧಾಪುರ: ಉಂಚಳ್ಳಿ ಜಲಪಾತದ ಸ್ವಚ್ಚತಾ ಕಾರ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕ ಭೀಮಣ್ಣ ಭಾಗಿ
ಸಿದ್ದಾಪುರ : ಶಾಸಕ ಭೀಮಣ್ಣ ನಾಯ್ಕ ಅವರು ಸಿದ್ದಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಶಿಬಿರದ ವಿದ್ಯಾರ್ಥಿಗಳ ಜೊತೆ ಉಂಚಳ್ಳಿ ಜಲಪಾತದ ವೀಕ್ಷಣಾ ಸ್ಥಳಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈಸಂದರ್ಭದಲ್ಲಿ ಅವರು ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ಕಲಿತ ಹೊಸ ಹೊಸ ಹವ್ಯಾಸ, ಅವರ ಜೀವನದ ಮುಂದಿನ ಗುರಿಗಳನ್ನು ಕುರಿತು ಮಾಹಿತಿ ಪಡೆದರು. ಅಲ್ಲದೇ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳಿಗೆ ಶಾಸಕರು ಭೋಜನದ ವ್ಯವಸ್ಥೆ ಮಾಡಿದರು. ಈ ವೇಳೆ ಕಾಲೇಜಿನ ಶಿಕ್ಷಕರು, ಸ್ಥಳೀಯ ಪ್ರಮುಖರು ಇದ್ದರು.