ಶಿವಮೊಗ್ಗ: ಹಿಟ್ಟೂರು ಕ್ರಾಸ್ ಬಳಿ ಬೈಕ್-ಮಾರುತಿ ಓಮಿನಿ ಮಧ್ಯೆ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು
ಶಿವಮೊಗ್ಗ ತಾಲೂಕಿನ ಹಿಟ್ಟೂರು ಕ್ರಾಸ್ ಬಳಿ ಬೈಕ್ ಮತ್ತು ಮಾರುತಿ ಓಮ್ನಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಈ ಅಪಘಾತದಲ್ಲಿ ನ್ಯಾಮತಿ ತಾಲೂಕು ಕೊಡತಾಳು ಗ್ರಾಮದ ಜಗದೀಶ್ (30) ಮೃತಪಟ್ಟಿದ್ದಾರೆ ಶಿವಮೊಗ್ಗ ತಾಲೂಕಿನ ಹಿಟ್ಟೂರು ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಬೈಕ್‌ನಲ್ಲಿ ಹಾರನಹಳ್ಳಿ ಬ್ಯಾಂಕ್‌ಗೆ ಬರುತ್ತಿದ್ದಾಗ ಹಿಟ್ಟೂರು ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಒಮ್ಮಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಜಗದೀಶ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ಕುಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.