ಶಿವಮೊಗ್ಗ: ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆ, ಮರ ಬಿದ್ದು ಲಕ್ಷಾಂತರ ರೂಪಾಯಿ ಹಾನಿ
ಕಳೆದ ಮೂರು ದಿನಗಳಿಂದ ಹೊಸನಗರ ತಾಲೂಕಿನ ಅತ್ಯಂತ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ಸಣ್ಣಪುಟ್ಟ ಅನಾಹುತಗಳ ನಡೆದ ಬಗ್ಗೆ ವರದಿಯಾಗಿದೆ ಹೊಸನಗರ ಪಟ್ಟಣದ ಮಾರಿಗುಡ್ಡದ ಸರ್ವೆ ನಂಬರ್ 13ರಲ್ಲಿ ಸೋಮವಾರ ರಾತ್ರಿ ಗಾಳಿ ಮಳೆಗೆ ಚಂದ್ರಶೇಖರ ಗೌಡರ ಮಾಲೀಕತ್ವದಲ್ಲಿ ನಿಲ್ಲಿಸಿದ ಪ್ರವಾಸಿ ಬಸ್ ಕೆಇಬಿ ಲೈಟ್ ಕೇಬಲ್ ಲೈಫ್ ಹಾಗೂ ಹಿರಿಯಣ್ಣನವರ ಮನೆಯಮೇಲೆ ಬೃಹತ್ ಗಾತ್ರದ ಅಕೀಷಿಯಾ ಮರ ಬಿದ್ದ ಪರಿಣಾಮ ಪ್ರವಾಸಿ ಬಸ್ ನಜ್ಜುಗುಜ್ಜಾಗಿದ್ದು ಮನೆಯ ಮೇಲ್ಭಾಗದಲ್ಲಿ ಪವರ್ ಶೀಟ್ ಸಂಪೂರ್ಣ ಜಖಂಆದ ಪರಿಣಾಮ ಸುಮಾರು 3ಲಕ್ಷ ರೂ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ ಇನ್ನ ಘಟನಾ ಸ್ಥಳಕ್ಕೆ ಮಂಗಳವಾರ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು