ಶಿವಮೊಗ್ಗ: ರಾಗಿ ಗುಡ್ಡದ ಬಳಿ ಗಾಂಜಾ ಮಾರಾಟ,ಮೂವರ ಬಂಧನ
ಶಿವಮೊಗ್ಗ ನಗರದ ರಾಗಿಗುಡ್ಡ ಚಾನಲ್ ಹತ್ತಿರ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ, ಗ್ರಾಮಾಂತರ ಪಿಐ ಸತ್ಯನಾರಾಯಣ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿನಡೆಸಿ, ಗಾಂಜಾ ಮಾರಾಟ ಮಾಡುತ್ತಿದವರನ್ನು ಬಂಧಿಸಿದೆ. ಗೋಪಾಳದ ಸಂಕೇತ್ (23), ನ್ಯೂಮಂಡ್ಲಿಯ ಅಂಬರೀಶ (26), ಪುರಲೆಯ ಧನುಷ್ (20) ಅವರನ್ನು ದಸ್ತಗಿರಿ ಮಾಡಿ, ಅಂದಾಜು ಮೌಲ್ಯ 68,000 ರೂಗಳ 1 ಕೆಜಿ 243 ಗ್ರಾಂ ತೂಕದ ಒಣ ಗಾಂಜಾ ಮತ್ತು 2,350 ರೂ ನಗದು ಹಣವನ್ನು ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ