ಯಾದಗಿರಿಯಲ್ಲಿ ದಹಿ ಹಂಡಿ ಉತ್ಸವಕ್ಕೆ ಚಾಲನೆ.
---
ಯಾದಗಿರಿ: ಪ್ರತಿ ವರ್ಷವು ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ದಹಿ ಹಂಡಿ ಉತ್ಸವ ಆಚರಿಸುವ ಮೂಲಕ ಭಾರತೀಯ ಸಂಸ್ಕ್ರತಿ ಧರ್ಮಾಚರಣೆಗಳು ಮುಂದಿನ ಪೀಳಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಗಾಂಧಿ ಚೌಕ್ ನಲ್ಲಿ ಗಿರಿನಾಡು ಗೆಳೆಯರ ಬಳಗ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ದಹಿ ಹಂಡಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಪರಮಾತ್ಮನು ಜಗದ ಉದ್ಧಾರಕ್ಕಾಗಿ ಅವತರಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಶಶಾಂಕ ನಾಲ್ವಡಗಿ,ಮುಖಂಡರಾದ ತಾಯಪ್ಪ ಯಾದವ್, ಮಹೇಶ ಅನಪುರ, ಪದಾಧಿಕಾರಿಗಳಾದ ದೊಡ್ಡಪ್ಪ ಚಂಡಕ್ರಿ, ಬಸವಪ್ರಭು, ದೇವು ಶೆಟ್ಟಿ, ಸಚಿನ್ ರಾಜು, ನಾಗರಾಜ, ರಾಘವೆಂದ್ರ, ರಮೇಶ, ಗೌತಮ್, ಸಾಬರೆಡ್ಡಿ, ಜಗಣ್ಣ, ಸಾಬರೆಡ್ಡಿ ನಾಯ್ಕಲ್ ಇದ್ದರು.
+++
Yadgir, Yadgir | Sep 8, 2026