ಬೆಂಗಳೂರು ಉತ್ತರ: ಮಹೇಶ್ ತಿಮ್ಮರೋಡಿ ಅರೆಸ್ಟ್; ಪೊಲೀಸ್ ವ್ಯವಸ್ಥೆಯಲ್ಲಿ ಉತ್ತರ ಕೊಡೋದಕ್ಕೆ ಅವಕಾಶ ಇದೆ: ನಗರದಲ್ಲಿ ಭರತ್ ಶೆಟ್ಟಿ
ಮಹೇಶ್ ತಿಮ್ಮರೊಡಿ ವಶಕ್ಕೆ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು, ಈ ಕೇಸ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ಆ್ಯಕ್ಷನ್ ತೆಗೆದುಕೊಳ್ಳೋದು ಸಹಜ. ಪೊಲೀಸ್ ವ್ಯವಸ್ಥೆಯಲ್ಲಿ ಉತ್ತರ ಕೋಡೋದಕ್ಕೆ ಅವಕಾಶ ಇದೆ. ಪೊಲೀಸರು ಅದನ್ನ ಮಾಡುತ್ತಾರೆ. ಮಹೇಶ್ ತಿಮ್ಮರೊಡಿ ಅವರ ವಿರುದ್ದ ಕೊಲೆ ಆರೋಪ ವಿಚಾರಕ್ಕೆ ಮಾತನಾಡಿ, ಎಲ್ಲಾ ರೀತಿಯ ತನಿಖೆಗೆ ಅವಕಾಶ ಇರುತ್ತದೆ. ಸುಜಾತಾ ಭಟ್ ಅವರ ಬಗ್ಗೆಯೂ ತನಿಖೆ ಆಗಬೇಕು. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಹೇಳೋರ ಬಗ್ಗೆ ತನಿಖೆ ಆಗಬೇಕು.ಸತ್ಯಾಸತ್ಯತೆ ಗೊತ್ತಾಗಬೇಕು,ಎಸ್ ಐಟಿ ತನಿಖೆ ಆಗ್ತಿದೆ.ಕಾಂಗ್ರೆಸ್ ಹೈಕಮಾಂಡ್ ನಿಂದ ಸೂಚನೆ ಬಂದಿದೆ ಅಂತ ನಾವು ಸದನದಲ್ಲಿ ಹೇಳಿದ್ದೇವೆ ಎಂದರು