ಶಿರಸಿ: ಬನವಾಸಿ ಸಮೀಪದ ಅಂಡಗಿ ಗ್ರಾ.ಪಂ ಅಧ್ಯಕ್ಷರಾಗಿ ರಾಮಣ್ಣ ಅವಿರೋಧ ಆಯ್ಕೆ
ಶಿರಸಿ : ಬನವಾಸಿ ಸಮೀಪದ ಅಂಡಗಿ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಆಯ್ಕೆ ಪ್ರಕ್ರಿಯೆ ಜರುಗಿತು. ಮಂಜುನಾಥ ಬಾಳಪ್ಪ ನಾಯ್ಕ ಅವರ ರಾಜಿನಾಮೆಯಿಂದ ತೆರವಾಗಿರುವ ಅಧ್ಯಕ್ಷ ಹುದ್ದೆಗೆ ಸದಸ್ಯ ಕಲಕರಡಿ ಗ್ರಾಮದ ರಾಮಣ್ಣ ಹಾದಿಮನಿ ಅವರು ನಾಮಪತ್ರವನ್ನು ಸಲ್ಲಿಸಿದ್ದರು. ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ರಾಮಣ್ಣ ಹಾದಿಮನಿಯವರು ಅವಿರೋಧವಾಗಿ ಆಯ್ಕೆಯಾದರು. ಶಿರಸಿಯ ಕೃಷಿ ಅಧಿಕಾರಿ ವಾಸಂತಿ ಅವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.