ಮಡಿಕೇರಿ: ಪೌರಕಾರ್ಮಿಕರ ವಿರುದ್ಧ ಅವಹೇಳನ, ಹೋಂಡಾ ಶೋರೂಂಗೆ 10 ಸಾವಿರ ದಂಡ!
ಮಡಿಕೇರಿಯಲ್ಲಿ ಪೌರಕಾರ್ಮಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹೋಂಡಾ ಶೋರೂಂ ಮ್ಯಾನೇಜರ್ ವಿರುದ್ಧ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಮ್ಯಾನೇಜಿಂಗ್ ಪಾರ್ಟ್ನರ್ ಕ್ಷಮೆಯಾಚಿಸಿದ ನಂತರ ಪ್ರತಿಭಟನೆ ಅಂತ್ಯಗೊಂಡಿದ್ದು, ನಗರಸಭೆ ಶೋರೂಂಗೆ 10 ಸಾವಿರ ರೂ. ದಂಡ ವಿಧಿಸಿದೆ.