ಬೆಂಗಳೂರು ಉತ್ತರ: ಕುರ್ಚಿ ಗೊಂದಲದಿಂದ ಸರ್ಕಾರದ ಕಾರ್ಯಕ್ರಮಗಳು ಜನಕ್ಕೆ ಕಾಣ್ತಿಲ್ಲ: ನಗರದಲ್ಲಿ ಮುನಿಯಪ್ಪ
ಸಚಿವ ಮುನಿಯಪ್ಪ ಅವರು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಆದಷ್ಟು ಬೇಗ ಸಿಎಂ, ಡಿಸಿಎಂ ಕರೆಸಿ ಹೈಕಮಾಂಡ್ ಮಾತಾಡಬೇಕು,ಆದಷ್ಟು ಬೇಗ ಗೊಂದಲ ಬಗೆಹರಿಸ ಬೇಕು ಇದನ್ನು ದೆಹಲಿಗೆ ಹೋದಾಗಲೂ ನಾನು ಮನವಿ ಮಾಡಿದ್ದೆ, ಜನ ಕಾರ್ಯಕ್ರಮಗಳತ್ತ ನೋಡ್ತಿಲ್ಲ, ಗೊಂದಲಗಳತ್ತ ನೋಡ್ತಿದ್ದಾರೆ,ನಮ್ಮ ಸಲಹೆ ಹೈಕಮಾಂಡ್ ಕೇಳಿದರೆ ನಾವು ಸಲಹೆ ಹೇಳ್ತೀವೆ, ಈ ಸಂದರ್ಭಕ್ಕೆ ಯಾವ ರೀತಿ ಇರಬೇಕೋ ಅದಕ್ಕೆ ಸೂಕ್ತವಾದ ಸಲಹೆ ಕೊಡ್ತೇವೆ ಮುನಿಯಪ್ಪ ಗೊಂದಲದಿಂದ ನಮ್ಮ ಸರ್ಕಾರದ ಕಾರ್ಯಕ್ರಮ ಗಳು ಜನಕ್ಕೆ ಕಾಣ್ತಿಲ್ಲ ಎಂದರು.