ಬೆಂಗಳೂರು ಉತ್ತರ: ನಗರದಲ್ಲಿ ಸ್ಪಾರ್ಕ್ ಚಿತ್ರದ ಟೀಸರ್ ಬಿಡುಗಡೆ ವೇಳೆ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಬರ್ತಡೇ ಆಚರಣೆ
ಸ್ಪಾರ್ಕ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಬುಧವಾರ ಬೆಂಗಳೂರಿನ ಮಾಗಡಿ ರಸ್ತೆ ಬಳಿಯ ಜಿ ಟಿ ಮಾಲ್ ನಲ್ಲಿ ನೆರವೇರಿತು. ಸಂಜೆ ೭ಗಂಟೆ ಸುಮಾರಿಗೆ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯಿತು. ಈ ಚಿತ್ರದಲ್ಲಿ ಪತ್ರಕರ್ತನ ಪಾರ್ತದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದು, ಇನ್ನೇನು ಶೂಟಿಂಗ್ ಮುಗಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ಇದೀಗ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿರುವ ಸಿನಿಮಾ ತಂಡ, ಮೊದಲಿಗೆ ಟೀಸರ್ ಹೊರತಂದಿದೆ. ಇದೇ ಇವೆಂಟ್ ನಲ್ಲಿ,ಚಿತ್ರತಡ ನಟ ನಿರಂಜನ್ ಅವರ ಬರ್ತಡೇ ಸೆಲೆಬ್ರೇಟ್ ಮಾಡಿದೆ. ನಿರಂಜನ್ ಅವರ ತಾಯಿ ಮತ್ತು ತಂದೆ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಹಾಂತೇಶ್ ಹಂದ್ರಾಳ್ ಈ ಸಿನಿಮಾದ ನಿರ್ದೇಶಕರು. ಚಿತ್ರದಲ