ಬೆಂಗಳೂರು ಉತ್ತರ: ಪ್ರಶ್ನೆ ಮಾಡಿದ ವ್ಯಕ್ತಿ ಮೇಲೆ ಖಾಸಗಿ ಬಸ್ ಹರಿಸಲು ಯತ್ನ, ಚಾಮರಾಜಪೇಟೆಯಲ್ಲಿ ಖಾಸಗಿ ಬಸ್ ಚಾಲಕರ ಹಾವಳಿ!
ಚಾಮರಾಜಪೇಟೆಯಲ್ಲಿ ಖಾಸಗಿ ಬಸ್ ಚಾಲಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಳ ರಸ್ತೆಯಲ್ಲಿ ಖಾಸಗಿ ಬಸ್ಗಳ ಸಂಚಾರ ಹೆಚ್ಚುತ್ತಿದ್ದು ಇದನ್ನ ವ್ಯಕ್ತಿ ಓರ್ವ ಪ್ರಶ್ನೆ ಮಾಡಿದ್ದಕ್ಕೆ ಆ ವ್ಯಕ್ತಿಯ ಮೇಲೆ ಬಸ್ ಹರಿಸುವಂತಹ ಯತ್ನ ನಡೆದಿದೆ. ಆಗಸ್ಟ್ 20ರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದು ಖಾಸಗಿ ಬಸ್ ಚಾಲಕರ ಆಟಟೋಪಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ತಳ್ಳು ತರಕಾರಿ ಗಾಡಿಗಳ ಮೇಲೆ ನೀರಿನ ಪೈಪ್ಗಳ ಮೇಲೆ ಬಸ್ಸನ್ನ ಹರಿಸಿಕೊಂಡು ಹೋಗ್ತಾರುವಂತಹ ಎಫೆಕ್ಟು ಜನ ಸಾಮಾನ್ಯರಿಗೆ ಸಮಸ್ಯೆ ಉಂಟಾಗುತ್ತಿದೆ.