ಬೆಂಗಳೂರು ಉತ್ತರ: ಈ ಸಿಗ್ನಲ್ ಅಲ್ಲಿ ಬದುಕಿದ್ದೆ ಹೆಚ್ಚು! ವಿದ್ಯಾರಣ್ಯಪುರದ ಒಂದು ಸಿಗ್ನಲ್ ಕಥೆ!
ವಿದ್ಯಾರಣ್ಯಪುರದ ಗಂಗಮ್ಮ ಸರ್ಕಲ್ ನಲ್ಲಿ ನಿಂತಿದ್ದ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿತ್ತು. ಆಗಸ್ಟ್ 19ರ ಬೆಳಗ್ಗೆ ಸುಮಾರು 11 ಗಂಟೆ 58 ನಿಮಿಷಕ್ಕೆ ವಾಹನದ ಮೇಲೆ ಮರದ ಕೊಂಬೆ ಬಿದ್ದಿದೆ. ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಈ ವಿಡಿಯೋ ಸರಿಯಾಗಿದೆ. ಬೈಕ್ ಮೇಲೆ ಬಿದ್ದಿದ್ದರೆ ಸವಾರರಿಗೆ ಪೆಟ್ಟು ಆಗುವ ಸಾಧ್ಯತೆ ಇತ್ತು. ಕಾರಿನ ಮೇಲೆ ಬಿದ್ದಿದ್ದರಿಂದ ಚಿಕ್ಕ ಡ್ಯಾಮೇಜ್‌ಗೆ ಘಟನೆ ಕೊನೆಗೊಂಡಿದೆ. ಆದರೂ ಈ ರೀತಿ ಬೆಂಗಳೂರಿನಲ್ಲಿ ಒಣಗಿದ ಮರಗಳ ಕೊಂಬೆ ಬೀಳೋದು ಸಾಮಾನ್ಯ ಅನ್ನುವಂತಾಗಿದ್ದು ಈ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ.