ಬೆಂಗಳೂರು ಉತ್ತರ: ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ನ ಸಾಧನಾ ಸಮಾವೇಶವೇಕೆ - ವಿಧಾನಸೌಧದಲ್ಲಿ ಸಿ.ಟಿ.ರವಿ ಪ್ರಶ್ನೆ
ರಾಜ್ಯ ಸರ್ಕಾರದ ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಜಾತ್ರೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದರು. ಆಗಸ್ಟ್ 20ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬಳಿ ಮಾತನಾಡಿದ ಅವರು, 'ನಾವು ಖಜಾನೆಗೆ ಮಾಲೀಕರಲ್ಲ, ಆದರೆ ಖಜಾನೆಯ ಟ್ರಸ್ಟಿಗಳು.ಒಂದೊಂದು ರೂಪಾಯಿ ಸಹ ಜನರ ಹಿತಕ್ಕೆ ಬಳಕೆಯಾಗಬೇಕು.ಆದರೆ ಈ ಸರ್ಕಾರ ಸಾಧನೆ ಮಾಡದೇ ಜನರ ಹಣವನ್ನ ಪೋಲು ಮಾಡಿದೆ.ವಿಜಯನಗರದ ಸಮಾವೇಶ ನಿಮ್ಮ ಪಕ್ಷದ ಸಮಾವೇಶ, ಜನರ ಹಣ ಏಕೆ ಬಳಸಿದ್ದೀರಿ ಎಂದು ಸಿ.ಟಿ.ರವಿ ಅವರು ಕಿಡಿಕಾರಿದರು.