ಬೆಂಗಳೂರು ಉತ್ತರ: ವಿಲ್ಸನ್ ಗಾರ್ಡನ್ ನಿಗೂಢ ಸ್ಫೋಟ, ಮಹಿಳೆ ಕೈ ಕಟ್! ಹೂ ಕಟ್ಟೋಕೆ ಆಗಲ್ಲ ಅಂತ ಅಳಲು, ಗಂಡ ಇಲ್ಲ ಮಕ್ಕಳಿಲ್ಲ!
ಆಗಸ್ಟ್ 15 ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ನಿಗೂಢ ಸ್ಫೋಟ ಪ್ರಕರಣ ಅನೇಕರ ಜೀವವನ್ನು ಹಲವರ ಜೀವನವನ್ನು ಕಸಿದು ಕೊಂಡಿದೆ. ಸದ್ಯ ಹೂ ಮಾರಿ ಬದುಕು ಕಟ್ಟಿಕೊಂಡಿದ್ದ ಸರಸ್ವತಿಯ ಕೈ ಕಟ್ ಮಾಡಲಾಗಿದೆ. ಸರಸ್ವತಿ ಗಂಡ ಆಕೆಗೆ ಮಕ್ಕಳಿಲ್ಲ ಅಂತ ದೂರಾಗಿದ್ದಾನೆ. ಈಕೆ ಉದ್ಯೋಗ ಬರಿ ಹೂ ಕಟ್ಕೊಂಡು ಜೀವನ ಮಾಡೋದು. ಹೀಗಿರುವಾಗ ಕೈಯೇ ಕಟ್ ಮಾಡಿದ್ದು ಸರಸ್ವತಿ ಮುಂದಿನ ಬದುಕಿನ ಬಗೆಗೆ ಆತಂಕ ಮೂಡಿಸದೆ. ತನ್ನದಲ್ಲದ ತಪ್ಪಿಂದ ಈಗ ಭವಿಷ್ಯವನ್ನು ನೆನೆಸಿಕೊಂಡು ಅಳುವ ಪರಿಸ್ಥಿತಿಯಲ್ಲಿ ಸರಸ್ವತಿ ಇದ್ದಾರೆ.