ಬೆಂಗಳೂರು ಉತ್ತರ: ಧರ್ಮಸ್ಥಳದ ಕುರಿತು ಸುಳ್ಳುಗಳ ಹಿಂದಿರುವ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ - ವಿಧಾನಸೌಧದಲ್ಲಿ ಜನಾರ್ದನ ರೆಡ್ಡಿ
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳನ್ನ ಸತ್ಯ ಮಾಡಲು ಹೊರಟಿರುವ ವ್ಯಕ್ತಿಗಳ ಹಿಂದಿರುವ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪುನರುಚ್ಚರಿಸಿದ್ದಾರೆ. ಆಗಸ್ಟ್ 20ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬಳಿ ಮಾತನಾಡಿದ ಅವರು, ನಾನು ಆಧಾರ ರಹಿತ ಆರೋಪ ಮಾಡಿರುವುದಾಗಿ ಹೇಳುವ ಮೂಲಕ ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ನನ್ನ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾದಾಗ ಸಸಿಕಾಂತ್ ಸೆಂಥಿಲ್ ಎಂಬುವವನು ಬಳ್ಳಾರಿಯಲ್ಲಿ ಕೆಲಸ ಮಾಡಿರಲೇ ಇಲ್ಲ. ಆತ ಓರ್ವ ಹಿಂದೂ ವಿರೋಧಿ.ದಕ್ಷಿಣ ಕನ್ನಡ ಡಿಸಿ ಆಗಿದ್ದಾಗಲೇ ಇದಕ್ಕೆ ಪ್ಲಾನ್ ಮಾಡಿಕೊಂಡಿದ್ದಾನೆ" ಎಂದು ಹರಿಹಾಯ್ದರು.