ದಾಂಡೇಲಿ: ಸುಭಾಷ್ ನಗರದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ರಾಮತಾರಕ್ ಹೋಮ್ ರಾಮ್ ಆರಾಧನೆ ಮತ್ತು ವಿಶೇಷ ಪೂಜಾರಾಧನೆ
ದಾಂಡೇಲಿ : ಶ್ರೀ ಹನುಮ ಮಾಲಾಧಾರಣೆಯ ನಿಮಿತ್ತವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ದಾಂಡೇಲಿ ಘಟಕದ ಆಶ್ರಯದಡಿ ದಾಂಡೇಲಿಯ ಸುಭಾಷ್ ನಗರದಲ್ಲಿರುವ ಶ್ರೀ.ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ರಾಮತಾರಕ್ ಹೋಮ್ ರಾಮ್ ಆರಾಧನೆ ಮತ್ತು ವಿಶೇಷ ಪೂಜಾರಾಧನೆಯು ಸಂಭ್ರಮ ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ಮಹಾ ಮಂಗಳಾರತಿಯಾದ ನಂತರ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿದರು.