ಹಾಸನ: ಹಾಸನಾಂಬೆ ದೇವಾಲಯಕ್ಕೆ ದಾಖಲೆಯ ಆದಾಯ: ಸಂಗ್ರಹವಾದ ಮೊತ್ತವೆಷ್ಟು?
Hassan, Hassan | Nov 12, 2026 ಹಾಸನಾಂಬೆ ದೇವಾಲಯದ ಈ ಬಾರಿಯ ಉತ್ಸವದಲ್ಲಿ ಭಕ್ತರಿಂದ ದಾಖಲೆಯ ಆದಾಯ ಹರಿದುಬಂದಿದೆ. ಒಟ್ಟು 29.55 ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 4 ಕೋಟಿ ರೂ. ಹೆಚ್ಚು ಆದಾಯ ಬಂದಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ.