ಬೆಂಗಳೂರು ಉತ್ತರ: “ಮೊದಲು 15,000 ಗುಂಡಿಗಳನ್ನು ಮುಚ್ಚಿ, ನಂತರ ಟನಲ್ ರಸ್ತೆಯ ಬಗ್ಗೆ ಮಾತನಾಡಿ” — ನಿಖಿಲ್ ಕುಮಾರಸ್ವಾಮಿ
ಮುಖ್ಯಮಂತ್ರಿಗಳೇ, ಉಪ ಮುಖ್ಯಮಂತ್ರಿಗಳೇ — ಮೊದಲು ಬೆಂಗಳೂರಿನ 15,000 ಗುಂಡಿಗಳನ್ನು ಮುಚ್ಚಿ, ನಂತರ ಟನಲ್ ರಸ್ತೆಯ ಬಗ್ಗೆ ಮಾತನಾಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ಜನತಾದಳ (ಎಸ್) ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಅವರು ಮುಂದುವರಿಸಿ, “ಈ ಸರ್ಕಾರಕ್ಕೆ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ; ಇನ್ನೂ 50 ತಿಂಗಳುಗಳಲ್ಲಿ ಟನಲ್ ರಸ್ತೆ ನಿರ್ಮಾಣ ಸಾಧ್ಯವೇ? ಈ ಯೋಜನೆ ಯಾರಿಗಾಗಿ? ನಾಗರಿಕರ ತೆರಿಗೆ ಹಣವನ್ನು ವ್ಯಯಿಸಿ ಅವೈಜ್ಞಾನಿಕ ಟನಲ್ ನಿರ್ಮಾಣ ಮಾಡುವುದು ಸರಿಯಲ್ಲ. ಮೊದಲಿಗೆ ಸಾರ್ವಜನಿಕರಿಗೆ ಉತ್ತಮ ಹಾಗೂ ಸುರಕ್ಷಿತ ರಸ್ತೆಗಳನ್ನು ಕಲ್ಪಿಸಿ,” ಎಂದು ಸರ್ಕಾರವನ್ನು ಪ್ರಶ್ನಿಸಿದರು.