ಚನ್ನಪಟ್ಟಣ: 8 ದಿನಗಳಿಂದ ವ್ಯರ್ಥವಾಗಿ ಹರಿಯುತ್ತಿದೆ ಕಾವೇರಿ ನೀರು, ಅಧಿಕಾರಿಗಳ ನಿರ್ಲಕ್ಷ್ಯ!
ಚನ್ನಪಟ್ಟಣ-ಹಲಗೂರು ರಸ್ತೆಯ ಕೋಡಂಬಳ್ಳಿ ಗ್ರಾಮದ ಬಳಿ ಕಳೆದ 8 ದಿನಗಳಿಂದ ಕಾವೇರಿ ನೀರಿನ ಪೈಪ್ಲೈನ್ ಸೋರಿಕೆಯಾಗುತ್ತಿದೆ. ಅಮೂಲ್ಯವಾದ ನೀರು ರಸ್ತೆಯ ಮೇಲೆ ವ್ಯರ್ಥವಾಗಿ ಹರಿಯುತ್ತಿದ್ದರೂ, ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.