ಉಡುಪಿ: ಮಂಗಳೂರು ವಿವಿ ಟೇಬಲ್ ಟೆನಿಸ್: ದ್ವಿತೀಯ ಸ್ಥಾನ ಗಳಿಸಿದ ಡಾ. ಜಿ. ಶಂಕರ್ ಮಹಿಳಾ ಕಾಲೇಜು
Udupi, Udupi | Oct 15, 2026 ಮಂಗಳೂರು ವಿವಿ ಅಂತರ್ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆದಿದೆ. ರಕ್ಷಿತಾ, ತುಷಾರಾ, ಶಾಲಿಕಾ ಮತ್ತು ಸಮೃದ್ಧಿ ಅವರ ತಂಡವು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದೆ.