ಶಿವಮೊಗ್ಗ: ಹಿರೇಮನೆ ಗ್ರಾಮದಲ್ಲಿ ಮರದ ಕೊಂಬೆ ಮೈ ಮೇಲೆ ಬಿದ್ದು ರೈತ ಸಾವು
ಮರದ ಕೊಂಬೆ ಮೈಮೇಲೆ ಬಿದ್ದು ರೈತರೊಬ್ಬರು ಮೃತಪಟ್ಟಿದ್ದಾರೆ. ಕೊಂಬೆ ಕಾತರಿಸುತ್ತಿರುವಾಗ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ ರೈತ ಅಶೋಕ್ ಅವರು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯುವಾಗ ಮೃತಪಟ್ಟಿದ್ದಾರೆ.ಸಾಗರ ತಾಲೂಕಿನ ತಾಲೂಕು ಹೋಬಳಿಯ ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮನೆ ಗ್ರಾಮದಲ್ಲಿ ಸೋಮವಾರ ಘಟನೆ ಸಂಭವಿಸಿದ ಮನೆ ಹಿಂಬಾಗ ಬೃಹದಾಕಾರವಾಗಿ ಬೆಳೆದಿದ್ದ ಮರವನ್ನು ಕೆಲಸಗಾರರು ಕತ್ತರಿಸುತ್ತಿದ್ದ ವೇಳೆ ನಿಯಂತ್ರಣಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿ ಅಶೋಕ್ ಅವರ ತಲೆಯ ಮೇಲೆ ಕೊಂಬೆ ಬಿದ್ದಿದೆ.ಇದರ ಪರಿಣಾಮ ಅಶೋಕ್ ಅವರು ಮೃತಪಟ್ಟಿದ್ದು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.