ಶಿವಮೊಗ್ಗ: ನಗರದ ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ; ಸ್ಥಳಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ
ಶಿವಮೊಗ್ಗದ ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಡಿ ಸಿಎಂ ಕೆ.ಎಸ್. ಈಶ್ವರಪ್ಪ ಸೋಮವಾರ ರಾತ್ರಿ ಶಿವಮೊಗ್ಗ ಗಾಂಧಿ ಬಜಾರ್ ನ ಬಟ್ಟೆ ಮಾರುಕಟ್ಟೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಐದ ರಿಂದ ಆರು ಅಂಗಡಿಗಳು ಸುಟ್ಟು ಹೋಗಿದ್ದು, ಮಂಗಳವಾರ ಮಾಜಿ ಡಿಸಿಎಂ.ಕೆ.ಎಸ್.ಈಶ್ವರಪ್ಪನವರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದರು. ಬಳಿಕ ಅಂಗಡಿಯ ಮಾಲೀಕರೊಂದಿಗೆ ಚರ್ಚೆ ನಡೆಸಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾನಿಗೊಳಗಾದ ಅಂಗಡಿಯ ಮಾಲೀಕರಿಗೆ ಪರಿಹಾರ ನೀಡುವಂತೆ ಸಹ ಸೂಚನೆ ನೀಡಿದ್ದಾರೆ.