ಉಡುಪಿ: ಉಚ್ಚಿಲ ದಸರಾ ಕುಸ್ತಿ ಪಂದ್ಯಾವಳಿ: ಯಾರಿಗೆ ಒಲಿದು ಬಂತು 'ಕೇಸರಿ' ಪ್ರಶಸ್ತಿ?
Udupi, Udupi | Oct 14, 2026 ಉಡುಪಿಯ ಉಚ್ಚಿಲ ದಸರಾ ಅಂಗವಾಗಿ ನಡೆದ ಅಂತರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 232 ಸ್ಪರ್ಧಿಗಳು ಭಾಗವಹಿಸಿದ್ದರು. ಶೌರ್ಯಾ 'ಉಚ್ಚಿಲ ದಸರಾ ಕುವರಿ', ಪ್ರಕಾಶ್ 'ಉಚ್ಚಿಲ ದಸರಾ ಕುಮಾರ್' ಹಾಗೂ ಮನೋಜ್ 'ಉಚ್ಚಿಲ ದಸರಾ ಕೇಸರಿ' ಪ್ರಶಸ್ತಿ ಪಡೆದರು. ಸಮಗ್ರ ತಂಡ ಪ್ರಶಸ್ತಿಯನ್ನು ಶಿವಾಜಿ ಫಿಜಿಕಲ್ ಬೋಳಾರ್ ತಂಡ ಪಡೆದುಕೊಂಡಿತು.