ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ದರ್ಗಾ ಮುಂಭಾಗದಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಉತ್ತರಪ್ರದೇಶದ ಖಾನ್ಪುರದಲ್ಲಿ ಐ ಲವ್ ಮಹಮ್ಮದ್ ಎಂದು ಬರೆದಿದ್ದಕ್ಕೆ ಎಫ್ಐಆರ್ ಹಾಕಲಾಗಿದೆ. ಹಾಗಾಗಿ ಇಂತಹ ಕೃತ್ಯಗಳು ಪ್ರಜಾಪ್ರಭುತ್ವ ದೇಶದಲ್ಲಿ ಹಾಗೂ ಸರ್ವಧರ್ಮ ಸಹಿಷ್ಣು ದೇಶದಲ್ಲಿ ನಡೆಯಬಾರದು ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಾ. ಎಪಿಜೆ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ನ ರಾಜ್ಯಾಧ್ಯಕ್ಷ ನಂದಿ ಬಾಷಾ ರವರು ಜೈ ಶ್ರೀ ರಾಮ್ ಎನ್ನುವ ರೀತಿಯಲ್ಲಿ ಐ ಲವ್ ಮೊಹಮ್ಮದ್ ಎನ್ನುವುದು ಕೂಡ ಸಹಜ ಹಾಗಾಗಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.