ಚಳ್ಳಕೆರೆ: ಬೆಲೆ ಏರಿಕೆ ಹಾಗೂ ಬೆಳೆ ವಿಮೆ ವಿಳಂಬ ಖಂಡಿಸಿ ರೈತರ ಆಕ್ರೋಶ
ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆ, ಬೆಳೆ ನಷ್ಟ ಪರಿಹಾರ ಹಾಗೂ ವಿಮೆ ವಿತರಣೆಯಲ್ಲಿನ ವಿಳಂಬದ ವಿರುದ್ಧ ರೈತ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.