ಉಲ್ಲಾಳ: ತೊಕ್ಕೂರು: ಭಜನಾ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ತೊಕ್ಕೂರು ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ನಡೆದ ಭಜನಾ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ ಶ್ರೀನಾಥ್ ಶೆಟ್ಟಿಗಾರ್ (38) ಎಂಬುವವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಅಷ್ಟಮಿ ಉತ್ಸವಕ್ಕಾಗಿ ಊರಿಗೆ ಆಗಮಿಸಿದ್ದರು.