ಹಾಸನ: ಭರ್ಜರಿ ಆಫರ್ ಗೆ ಬಟ್ಟೆ ಖರೀದಿಸಲು ಬಂದ ಜನರಿಗೆ ಪೊಲೀಸರ ಲಾಠಿ ರುಚಿ ಅರಳೇಪೇಟೆ ರಸ್ತೆಯಲ್ಲಿ ಘಟನೆ
Hassan, Hassan | Jul 6, 2025 ಹಾಸನ: 1,000 ರೂಪಾಯಿಗೆ 10 ಪ್ಯಾಂಟ್‌ಗಳು ಅಥವಾ,10 ಶರ್ಟ್‌ಗಳ ಭರ್ಜರಿ ಆಫರ್ ಘೋಷಿಸಿದ ಹೊಸದಾಗಿ ತೆರೆದ ಬಟ್ಟೆ ಅಂಗಡಿಯ ಮುಂದೆ ಭಾರೀ ಜನಸಂದಣಿ ಸೇರಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅಂಗಡಿ ಮುಚ್ಚಿಸಿದ ಘಟನೆ ಭಾನುವಾರ ಮಧ್ಯಾಹ್ನ ನಗರದ ಸಹ್ಯಾದ್ರಿ ಥಿಯೇಟರ್ ಹಿಂಬದಿಯ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ. ಫ್ರೆಂಡ್ಸ್ ಹೋಲ್ ಗಾರ್ಮೆಂಟ್ಸ್ ಅಂಗಡಿಯಲ್ಲಿ ಉದ್ಘಾಟನೆಯ ಆಕರ್ಷಣೆಯಾಗಿ 1,000 ರೂಪಾಯಿಗೆ 10 ಪ್ಯಾಂಟ್‌ಗಳು ಅಥವಾ 10 ಶರ್ಟ್‌ಗಳ ಆಫರ್ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ಜನರು ಭಾರೀ ಸಂಖ್ಯೆಯಲ್ಲಿ ಗುಂಪುಗೂಡಿದರು.