ರಾಯಚೂರು: ನಗರದಲ್ಲಿ ಇಂದು ಮಹಾಗಣಪತಿ ವಿಸರ್ಜನೆ ಸೋಬ
ಭಾಯಾತ್ರೆ, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ
ರಾಯಚೂರ ನಗರದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಮಂಗಳವಾರ ಸಂಜೆಯಿಂದ ಅದ್ದೂರಿ ಮೆರವಣಿಗೆಯ ಶೋಭಾ ಯಾತ್ರೆಯ ಅದ್ಧೂರಿ ಮೆರವಣಿಗೆ ಆರಂಭಿಸಲಾಗಿದೆ. ರಾಯಚೂರು ನಗರದ ಪ್ರಮುಖ ಬೀದಿಗಳ ಮೂಲಕ ಶುಭ ಯಾತ್ರೆ ನಡೆಯುತ್ತಿದ್ದು, ವಾದ್ಯಗಳ ಮೇಳ ಕಲಾತಂಡಗಳ ಮೆರಗೂ ನೋಡುಗರ ಗಮನ ಸೆಳೆಯುತ್ತಿದೆ. ನಗರದ ಗಂಜ್ ವೃತ್ತದಿಂದ ಕಾಸಭಾವಿ ವರೆಗೆ ಅದ್ದೂರಿ ಮೆರವಣಿಗೆಯನ್ನು ನಡೆಸಲಾಗಿದ್ದು ಸಾವಿರಾರು ಜನರು ಭಾಗವಹಿಸಿದ್ದಾರೆ.