ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆ ಶಾಂತಿಯುತವಾಗಿ, ಗೊಂದಲವಿಲ್ಲದೆ ಮತದಾನ ಪ್ರಕ್ರಿಯೆ ಮಾಡಲು ನಾಲ್ಕು ಜನ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದ್ದು ನಾಲ್ಕು ಹಂತದಲ್ಲಿ ಪರಿಶೀಲನೆ ಆಗಲಿದೆ. ಮತದಾನ ಚಲಾಯಿಸುವ ಮತದಾರರು ಕಡ್ಡಾಯವಾಗಿ ಸಂಘದ ಗುರುತಿನ ಚೀಟಿ ತರಬೇಕು. ಎರಡು ವರ್ಷದ ಗುರುತನ ಚೀಟಿ ಇಲ್ಲದಿದ್ದರೂ ಕನಿಷ್ಠ ಒಂದು ವರ್ಷದ ಗುರುತಿನ ಚೀಟಿಯಾದರೂ ತರುವುದು ಕಡ್ಡಾಯ ಎಂದು ಬುದುವಾರ 3 ಗಂಟೆಗೆ ನಡೆದ ಸಭೆಯಲ್ಲಿ ಚುನಾವಣೆ ಅಧಿಕಾರಿ ಮಲ್ಲಣ್ಣ ಹೇಳಿದರು.