ರಾಯಚೂರು: ವಿದ್ಯಾರ್ಥಿನಿಯರ ಕೌಶಲ್ಯ ವೃದ್ಧಿಗೆ ನಾಂದಿ ಫೌಂಡೇಶನ್ ಕಾರ್ಯ ಶ್ಲಾಘನೆ
ಸರಕಾರಿ ಶಾಲೆಗಳಲ್ಲಿ ನಾಂದಿ ಫೌಂಡೇಶನ್ ವರಿಯಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತಿದ್ದು ಇವರ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕರಾದ ಬಂದೇನವಾಜ ಅವರು ಬುಧವಾರ 10 ಗಂಟೆಗೆ ಹೇಳಿದರು. ರಾಯಚೂರು ತಾಲ್ಲೂಕಿನ ಡಿ.ಯದ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ದಿನಗಳ ಕೆ.ಸಿ ಮಹೇಂದ್ರ ಶಿಕ್ಷಣ ಸಂಸ್ಥೆ ಹಾಗೂ ನಾಂದಿ ಫೌಂಡೇಶನ್ ಮೂಲಕ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಇಂದು ಕೊನೆಯ ದಿನದ ಅಂಗವಾಗಿ ತರಬೇತಿಯಲ್ಲಿ ಉತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು.