ಕೊಟ್ಟೂರು: ಕೊಟ್ಟೂರು ಸರ್ಕಾರಿ ಶಾಲೆಯಲ್ಲಿ ಊಟ ಸವಿದು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ ಸಿಇಒ
ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್ ಅವರು ಕೊಟ್ಟೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಅಡುಗೆ ಕೋಣೆಯಲ್ಲಿ ಊಟ ಸವಿದ ಸಿಇಒ, ವಿದ್ಯಾರ್ಥಿನಿಯರಿಗೆ ಪರೀಕ್ಷಾ ಸಿದ್ಧತೆ ಹಾಗೂ ಏಕಾಗ್ರತೆಯ ಕುರಿತು ಕಿವಿಮಾತು ಹೇಳಿದ್ದಾರೆ.