ಚಿತ್ರದುರ್ಗ: ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ, 3 ಲಾರಿಗಳು ಸುಟ್ಟು ಭಸ್ಮ
ಚಿತ್ರದುರ್ಗದ ಗುಡ್ಡದ ರಂಗವ್ವನಹಳ್ಳಿ ಬಳಿಯ ಮಾರೇಶ್ವರ ಆಗ್ರೋ ಫೀಡ್ಸ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ನಿಲ್ಲಿಸಿದ್ದ ಮೂರು ಲಾರಿಗಳು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.