ಉಡುಪಿ: ಕಂಬಳದ ಲೆಜೆಂಡ್ 'ನಂದಳಿಕೆ ಪಾಂಡು' ಕೋಣ ವಿಧಿವಶ
Udupi, Udupi | Sep 28, 2026 ಕಂಬಳ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ 'ನಂದಳಿಕೆ ಪಾಂಡು' ಕೋಣ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ಹಗ್ಗ ವಿಭಾಗದಲ್ಲಿ ಸತತ ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಾಂಡು, ತನ್ನ ವೇಗದ ಓಟದಿಂದಲೇ ಕಂಬಳಾಭಿಮಾನಿಗಳ ಮನಗೆದ್ದಿತ್ತು. ಕೋಣದ ಅಗಲಿಕೆಗೆ ಕಂಬಳದ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.