ಮೈಸೂರು: ಬನ್ನಿಮಂಟಪದಲ್ಲಿ ಹಯಾಬುಸಾ ಬೈಕ್ ಸವಾರನ ಅಕ್ರಮ ರೇಸಿಂಗ್ ನಿಂದ ಅಪಘಾತ ಇಬ್ಬರೂ ಸ್ಥಳದಲ್ಲೇ ಸಾವು
Mysuru, Mysuru | Jul 6, 2025 ಎಂಪೈರ್ ಹೋಟೆಲ್‌ನಿಂದ ಎನ್.ಆರ್. ಮೊಹಲ್ಲಾಕ್ಕೆ ತೆರಳುತ್ತಿದ್ದ ಜೊಮೊಟೋ ಬೈಕ್ ಸವಾರನಿಗೆ ಡಿಕ್ಕಿಹೊಡೆದ ಹಯಾಬೂಝ ಸವಾರ. ಇಬ್ಬರು ಕೂಡ ಸ್ಥಳದಲ್ಲೇ ಮೃತ. ಎನ್.ಆರ್.ಸಂಚಾರ ಠಾಣೆಯಲ್ಲಿ ದೂರು ದಾಖಲು. ಭಾನುವಾರ ಮುಂಜಾನೆ ಬೈಕ್ ರೇಸಿಂಗ್, ಅಪಘಾತದ ರಭಸಕ್ಕೆ ಹೊತ್ತಿ ಉರಿದ ಹಯಾಬೂಝ ಬೈಕ್. ಜೊಮೋಟೋ ತೆಗೆದುಕೊಂಡು ಹೋಗ್ತಿದ್ದ ಹುಡುಗನ ಬೈಕ್ ಗೆ ಢಿಕ್ಕಿ. ಢಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕುರುಳಿದ ಬೈಕ್. ಪೆಟ್ರೋಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಸುಟ್ಟು ಕರಕಲಾದ ಬೈಕ್ ಅಪಘಾತದಿಂದ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.