ಬೆಂಗಳೂರು ಉತ್ತರ: ರಾಹುಲ್ ಗಾಂಧಿ ವಿರುದ್ದ ಮಾತಾಡಿದಕ್ಕೆ ಸಚಿವ ರಾಜಣ್ಣ ರಾಜೀನಾಮೆ: ನಗರದಲ್ಲಿ ಬಿ.ವೈ ವಿಜಯೇಂದ್ರ
ಕೆ.ಎನ್ ರಾಜಣ್ಣ ಅವರ ರಾಜಿನಾಮೇ ಕುರಿತಂತೆ ಸೋಮವಾರ ಸಂಜೆ 6ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಹಿರಿಯ ಸಚಿವ ರಾಜಣ್ಣ ಅವರು ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರಾಜಕೀಯ ಕ್ರಾಂತಿ ಆಗುತ್ತೆ ಅಂತ ಹೇಳಿದ್ರು. ದುರಂತ ಅಂದ್ರೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಮತಗಳ್ಳತನ ಬಗ್ಗೆ ಹೋರಾಟ ಮಾಡಿ,ಗೂಬೆ ಕೂರಿಸೋ ಪ್ರಯತ್ನ ಮಾಡಿದ್ರು. ರಾಜಣ್ಣ ಅವರು ನಮ್ಮ ಸರ್ಕಾರದಲ್ಲೇ ಪರಿಷ್ಕರಣೆ ಅನಾಹುತ ಆಗಿದೆ ಅಂತ ಹೇಳಿದ್ರು. ಈ ಹೇಳಿಕೆಯನ್ನ ರಾಹುಲ್ ಗಾಂಧಿ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಇದ್ದಿದ್ದು ಇದ್ದಂಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರು ಅಂತ. ರಾಹುಲ್ ವಿರುದ್ಧ ಮಾತಾಡಿದ್ದಕ್ಕೆ ಸಿಎಂ, ರಾಜಣ್ಣ ಅವರ ರಾಜೀನಾಮೆ ಪಡೆದಿದ್ದಾರೆ ಎಂದರು.