ಶಿರಸಿ: ಶಿರಸಿ ನಗರಸಭೆ ಪೈಪ್ ಕಳ್ಳತನ ಪ್ರಕರಣದಲ್ಲಿ ನಗರಸಭೆ ಅಧಿಕಾರಿಗಳು, ಸದಸ್ಯರು ಭಾಗಿ : ಡಿಎಸ್ಪಿ ಕಚೇರಿಯಲ್ಲಿ ಎಸ್ಪಿ ನಾರಾಯಣ್ ಮಾಹಿತಿ
ಶಿರಸಿ: ಶಿರಸಿ ನಗರಸಭೆ ಪೈಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿ ನಗರಸಭೆ ಕಮಿಶನರ್ ಕಾಂತರಾಜು, ಜ್ಯೂನಿಯರ್ ಇಂಜಿನಿಯರ್ ಸುಫಿಯಾನ್ ಬ್ಯಾರಿ, ಎಇಇ ಪ್ರಶಾಂತ ವೆರ್ಣೇಕರ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ ಬೋರ್ಕರ್, ಯಶವಂತ ಮರಾಠಿ ಸರ್ಕಾರದ ನಿಯಮ ಉಲ್ಲಂಘಿಸಿ, ಆರೋಪಿತನಾದ ಶಿಕಾರಿಪುರದ ಸಯ್ಯದ ಝಕ್ರಿಯಾ ಜತೆ ಒಳಸಂಚು ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು. ಅವರು ಸೋಮವಾರ ನಗರದ ಡಿಎಸ್‌ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ ಸರ್ಕಾರಿ ನೌಕರರು ಮತ್ತು ಮೂವರು ನಗರಸಭೆ ಸದಸ್ಯರು ಪಬ್ಲಿಕ್ ಸರ್ವಂಟ್ ಆಗಿದ್ದಾರೆ ಎಂದರು.