ಶಿರಸಿ: ಪತಿಯ ಕೊಲೆಗೆ ಸುಪಾರಿ ನೀಡಿದ ಪತಿ, ಕೊಲೆಯತ್ನ ಆರೋಪಿಗೆ 10 ವರ್ಷ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ
ಶಿರಸಿ: ಕೊಲೆಗೈಯಲು ಪ್ರಯತ್ನಿಸಿದ ಗಣೇಶ ಶಾಂತಾರಾಮ್ ಪಾಟೀಲ್ ಹಾಗೂ ಸುಪಾರಿ ನೀಡಿದ ಪತ್ನಿ ತೇಜಸ್ವಿನಿ ಅಂಕುಷ ಸುತಾರಗೆ ೧೦ ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ೩೦ ಸಾವಿರ ರೂ. ದಂಡ ಹಾಗೂ ೧೦ ಸಾವಿರ ರೂ. ಗಾಯಾಳುಗೆ ಪರಿಹಾರ ನೀಡುವಂತೆ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ತೇಜಸ್ವಿನಿ ಅಂಕುಷ ಸುತಾರ ಇಕೆ ಅಂಕುಷ ರಾಮಾ ಸುತಾರನ ಪತ್ನಿಯಾಗಿದ್ದು, ಸಂಸಾರ ನಡೆಸಲು ಇಷ್ಟ ಇರದೇ ಇರುವುದರಿಂದ ಪತಿಯನ್ನು ಕೊಲೆ ಮಾಡುವ ಉದ್ದೇಶದಿಂದ ವನಿತಾ ಶಿವಾಜಿ ಚೌಗಲೆ ಹಾಗೂ ಗಣೇಶ ಶಾಂತಾರಾಮ್ ಪಾಟೀಲ್‌ರೊಂದಿಗೆ ಮಾತನಾಡಿಕೊಂಡು ಕೊಲೆ ಮಾಡಲು ಸಂಚು ನಡೆಸಿ, ಕೊಲೆ ಮಾಡಲು ೩೦ ಸಾವಿರ ರೂ ಸುಪಾರಿ ಹಣ ಕೊಡಲು ಒಪ್ಪಿಕೊಂಡಿದ್ದರು.