ಶಿರಸಿ: ತಾಲ್ಲೂಕಿನ ಹಳ್ಳಿಕಾನಿನ ಕೂಲಿ ದಂಪತಿ ಮಗ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ
ಶಿರಸಿ : ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ಪ್ರತಿಷ್ಠಿತ ಮೇ 2025 ರಲ್ಲಿ ನಡೆದ ಸಿಎ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ಮಂಜುನಾಥ ಹಾಗೂ ಶಾರದಾ ನಾಯ್ಕ ದಂಪತಿಗಳ ಮಗನಾಗಿದ್ದು, ತಂದೆ ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. ಚಿಕ್ಕ ಅರಣ್ಯ ಭೂಮಿಯಲ್ಲಿ ವಾಸಿಸುವ ಇವರು ಯಾವದೇ ಸ್ವಂತ ಜಮೀನು ಹೊಂದಿರಿವುದಿಲ್ಲ. ತೀರಾ ಕಡು ಬಡತನದ ಪರಿಸ್ಥಿಯಲ್ಲೂ ದೃತಿಗೆಡದೆ ಮನೆಯಲ್ಲಿಯೇ ಛಲದಿಂದ ಓದಿ ಅತೀ ಕಷ್ಟಕರ ಪರೀಕ್ಷೆಯಲ್ಲಿ ಒಂದಾದ ಸಿಎ ಎಲ್ಲ ಹಂತದ ಪರೀಕ್ಷೆ ಪಾಸ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.