ಶಿರಸಿ: ಶಿರಸಿ ಮೂಲದ ಸಹನಾ ಹೆಗಡೆ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ
ಶಿರಸಿ: ಶಿರಸಿ ಮೂಲದ ಹಾಲಿ ಬೆಂಗಳೂರು ನಿವಾಸಿ ಸಹನಾ ಹೆಗಡೆ ಹಿಂದೂಸ್ತಾನಿ ಸಂಗೀತ ಗಾಯನ(ವಿದ್ವತ್ ಅಂತಿಮ) ವಿಶೇಷ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಮೂಲಕ ಪ್ರಥಮ ರ್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಇವರು, ಈ ಮೊದಲು ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಳು. ಚಿಕ್ಕಂದಿನಿಂದಲೂ ಸಂಗೀತದಲ್ಲಿ ವಿಶೇಷ ಆಸಕ್ತಿ, ವಿವಿಧ ಟಿವಿ ಚಾನೆಲ್ ಗಳ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡು ಲಕ್ಷಾಂತರ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರಳಾಗಿದ್ದಾಳೆ.