ರಾಮನಗರ: ರಾಮನಗರದ ರೈತ ಮಹಿಳೆ ಶಾಂತಮ್ಮಗೆ ರಾಜ್ಯ ಮಟ್ಟದ ಕೃಷಿ ಸಾಧಕ ಪ್ರಶಸ್ತಿ
ರಾಮನಗರ ಜಿಲ್ಲೆಯ ಕಗ್ಗಲಹಳ್ಳಿ ಗ್ರಾಮದ ರೈತ ಮಹಿಳೆ ಶಾಂತಮ್ಮ ಅವರಿಗೆ ಕೃಷಿ ಅರಣ್ಯ ರೈತರು ಮತ್ತು ತಂತ್ರಜ್ಞರ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ಕೃಷಿ ಅರಣ್ಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.