ಬೆಂಗಳೂರು ಉತ್ತರ: ರಾಜಕಾರಣಿಗಳಿಗೆ ಇಲ್ಲದ ರೂಲ್ಸ್ ಜನ ಸಾಮಾನ್ಯರಿಗ್ಯಾಕೆ? ವಿಜಯನಗರದಲ್ಲಿ ವಿಜಯೇಂದ್ರ ಫ್ಲೆಕ್ಸ್ ಅಬ್ಬರಕ್ಕೆ ಜನಾಕ್ರೋಶ!
ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡುವ ಹಾಗಿಲ್ಲ. ಕಾನೂನು ಪ್ರಕಾರ ಅಳವಡಿಕೆ ಮಾಡಬಾರದು ಅಂತ ರೂಲ್ಸ್ ಇದ್ದರೂ ಕೂಡ ವಿಜಯನಗರದಾದ್ಯಂತ ವಿಜಯೇಂದ್ರ ಫ್ಲೆಕ್ಸ್ ಬ್ಯಾನರ್ ರಾರಾಜಿಸುತ್ತಿರುವುದು ಜನಾಕ್ರೋಶಕ್ಕೆ ಕಾರಣ ಆಗಿದೆ. ಜನ ಸಾಮಾನ್ಯರಿಗೆ ಒಂದು ರೂಲ್ಸ್ ರಾಜಕಾರಣಿಗಳಿಗೆ ಒಂದು ರೂಲ್ಸ್ ಯಾಕೆ ಅಂತ ಜನಾಕ್ರೋಶ ವ್ಯಕ್ತ ಪಡಿಸಿದ್ದಾರೆ.