ಕುಶಾಲನಗರ: ಗೌರಿ-ಗಣೇಶ ಹಬ್ಬ: ಸಾರ್ವಜನಿಕ ಪ್ರತಿಷ್ಠಾಪನೆಗೆ ಕಡ್ಡಾಯ ಅನುಮತಿ, ಒಂದೇ ಸೂರಿನಡಿ ಸಿಗಲಿದೆ ಪರ್ಮಿಷನ್
ಗೌರಿ-ಗಣೇಶ ಹಬ್ಬದ ಸಾರ್ವಜನಿಕ ಪ್ರತಿಷ್ಠಾಪನೆಗೆ ಕಡ್ಡಾಯ ಅನುಮತಿ ಪಡೆಯಲು ಜಿಲ್ಲಾ ಎಸ್ಪಿ ಬಿಂದುಮಣಿ ಸೂಚಿಸಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು, ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ.