ಜಿಲ್ಲಾ ಛಾಯಾಗ್ರಾಹಕರ ಸಂಘದ ನೂತನ ಕಾರ್ಯದರ್ಶಿ ಮೊಹಮ್ಮದ್ ಉಮರ್ಗೆ ಸನ್ಮಾನ
ಯಾದಗಿರಿ: ಯಾದಗಿರಿ ಜಿಲ್ಲಾ ಛಾಯಾಗ್ರಾಹಕರ ಸಂಘಕ್ಕೆ ನೂತನವಾಗಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊಹಮ್ಮದ್ ಉಮರ್ ಯೂ.ಡಿ. ಫಿಲ್ಮ್ಸ್ ಅವರನ್ನು ಸ್ನೇಹಿತರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ನಗರದಲ್ಲಿರುವ ಅವರ ಸ್ಟುಡಿಯೋದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ನೇಹಿತರು ಹಾಗೂ ಹಿತೈಷಿಗಳು ಮೊಹಮ್ಮದ್ ಉಮರ್ ಅವರನ್ನು ಸನ್ಮಾನಿಸಿ, ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಯಾರಿಗೂ ಸಂಪಾದಕ ಮೊಹಮ್ಮದ್ ರಫೀಕ್ ಪಟೇಲ್, ಮೊಹಮ್ಮದ್ ಗೌಸ್ ವಕೀಲರು ಹಾಗೂ ನೋಟರಿ ಯಾದಗಿರಿ, ರಿಯಾಜ್ ಅಹ್ಮದ್ ನ್ಯೂಸ್ 7 ಅಂಕರ್, ಮೊಹಮ್ಮದ್ ಶಹಾನವಾಜ್ ಸ್ಟರ್ಲೈಟ್ ಸೇಲ್ಸ್ ಮ್ಯಾನೇಜರ್, ಮೊಹಮ್ಮದ್ ರಿಯಾಜ್ ಹಾಗೂ ಮೊಹಮ್ಮದ್ ಗೌಸ್ ಸೈಕಲ್ ಸ್ಟೋರ್ ಮಾಲೀಕರು ಯಾದಗಿರಿ ಸೇರಿದಂತೆ ಸ್ನೇಹಿತರು ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮೊಹಮ್ಮದ್ ಉಮರ್ ಅವರು ಛಾಯಾಗ್ರಾಹಕರ ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಹಿತಾಸಕ್ತಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಸ್ನೇಹಿತರು ಹಾರೈಸಿದರು.
Yadgir, Yadgir | Sep 22, 2026