ಅಜಾನ್ ವೇಳೆ ಮೆರವಣಿಗೆ ತಾತ್ಕಾಲಿಕ ಸ್ಥಗಿತ; ಅಜಾನ್ ವೇಳೆ ಡಿಜೆ ಬಂದ್ ಮಾಡಿ ಸೌಹಾರ್ದತೆ ಮೆರೆದ ಗಣೇಶೋತ್ಸವ ಮಂಡಳಿ
ಹುಬ್ಬಳ್ಳಿ: ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಅಜಾನ್ ಆರಂಭವಾದ ಹಿನ್ನೆಲೆಯಲ್ಲಿ ಗಣೇಶೋತ್ಸವ ಮಂಡಳಿಯವರು ಡಿಜೆ ಸಂಗೀತವನ್ನು ಸ್ಥಗಿತಗೊಳಿಸಿ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸಿದ ಘಟನೆ ಹುಬ್ಬಳ್ಳಿಯ ಟೀಪು ನಗರದಲ್ಲಿ ನಡೆದಿದೆ.
ಟೀಪು ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುತ್ತಿದ್ದ ವೇಳೆ ಸಮೀಪದ ಮಸೀದಿಯಲ್ಲಿ ಅಜಾನ್ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಗಣೇಶೋತ್ಸವ ಮಂಡಳಿಯವರು ತಕ್ಷಣವೇ ಡಿಜೆ ಸಂಗೀತವನ್ನು ಬಂದ್ ಮಾಡಿದರು.
ಅಜಾನ್ ನಡೆಯುವ ವೇಳೆ ಯಾವುದೇ ರೀತಿಯ ಧ್ವನಿ ಅಡಚಣೆ ಉಂಟಾಗದಂತೆ ಕೆಲಕಾಲ ಮೆರವಣಿಗೆಯನ್ನು ಕೂಡ ಸ್ಥಗಿತಗೊಳಿಸಲಾಯಿತು. ಅಜಾನ್ ಪೂರ್ಣಗೊಂಡ ಬಳಿಕ ಮತ್ತೆ ಮೆರವಣಿಗೆಯನ್ನು ಮುಂದುವರಿಸಲಾಯಿತು.
ಧಾರ್ಮಿಕ ಆಚರಣೆಗಳಿಗೆ ಪರಸ್ಪರ ಗೌರವ ನೀಡುವ ಮೂಲಕ ಎರಡೂ ಸಮುದಾಯಗಳ ನಡುವೆ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಈ ನಡೆ ಸ್ಥಳೀಯರ ಗಮನ ಸೆಳೆದಿದೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಪರಸ್ಪರರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಗಣೇಶೋತ್ಸವದ ಸಂಭ್ರಮದ ನಡುವೆಯೂ ಅಜಾನ್ಗೆ ಗೌರವ ನೀಡಿ ಡಿಜೆ ಬಂದ್ ಮಾಡಿದ್ದ ಮಂಡಳಿಯ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಸುದ್ದಿಗಾಗಿ ಫಾಲೋ ಮಾಡಿ.
#ಹುಬ್ಬಳ್ಳಿ #ಟೀಪುನಗರ #ಗಣೇಶೋತ್ಸವ #ಗಣೇಶವಿಸರ್ಜನೆ #ಗಣೇಶಮೆರವಣಿಗೆ #ಅಜಾನ್ #ಸೌಹಾರ್ದತೆ #ಧಾರ್ಮಿಕಸೌಹಾರ್ದತೆ #ಸಹಬಾಳ್ವೆ #ಶಾಂತಿ #Hubballi #Ganeshotsava #GaneshVisarjan #YadgirNews