ಮಂಗಳೂರು: ನೆಲಸಮವಾದ ಶತಮಾನದ ಹಳೆಯ ಪಾರಂಪರಿಕ ಸೂಟರ್ ಹಾಸ್ಟೆಲ್
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಬ್ರಿಟಿಷರ ಕಾಲದ ಐತಿಹಾಸಿಕ ಸೂಟರ್ ಹಾಸ್ಟೆಲ್ ಕಟ್ಟಡ ನೆಲಸಮವಾಗಿದೆ. 1926ರಲ್ಲಿ ಸ್ಥಾಪನೆಯಾಗಿದ್ದ ಈ ಹಾಸ್ಟೆಲ್ ಅನ್ನು ಉಳಿಸಿಕೊಳ್ಳಬೇಕಿತ್ತು ಎಂದು ಸಂಸ್ಥಾಪಕ ಸೌಕಾರ್ ಧೂಮಪ್ಪ ಕಾಂಟ್ರಾಕ್ಟರ್ ಅವರ ವಂಶಸ್ಥರು ಬೇಸರ ವ್ಯಕ್ತಪಡಿಸಿದ್ದು, ಆ ಸ್ಥಳದಲ್ಲಿ ಸಾರ್ವಜನಿಕ ಬಳಕೆಯ ಸಂಸ್ಥೆಯನ್ನು ನಿರ್ಮಿಸಲು ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.