ನಾಳೆ ಡಿಸಿಎಂ ಸಿಎಂ ರನ್ನು ಬ್ರೇಕ್ ಫಾಸ್ಟ್ ಗೆ ಕರೆದಿರುವ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಂ, ಡಿಸಿಎಂ ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ, ಅದನ್ನು ಬಹಿರಂಗವಾಗಿಯೇ ಅಕ್ಕಪಕ್ಕ ಕೂತು ಮಾತಾಡಿದ್ದಾರೆ. ಅವರಿಬ್ಬರು ಹೇಳಿದ್ಮೇಲೆ ಇನ್ನೂ ಮಾತಾಡೋಕೆ ನಾವು ಯಾರು..? ಬ್ರೇಕ್ ಫಾಸ್ಟ್ ಗೆ ಕರೆದಿಲ್ಲ ಅಂದರೆ ಅದು ಹೆಡ್ ಲೈನ್ ನಿಮಗೆ ಇಬ್ಬರ ನಡುವೆ ಸಮನ್ವಯತೆ ಇಲ್ಲ ಅಂತಾ. ಕರೆದ್ರು ಕೂಡ ಹೆಡ್ ಲೈನ್, ಅದೇನು ಹೇಳಿ ಕೇಳಿ ಮಾಡಬೇಕಾ...? ನಿತ್ಯ ಊಟಕ್ಕೆ ತಿಂಡಿಗೆ ಸೇರೋದೇ ಇಲ್ಲವಾ..? ಹಿಂದೆ ಪರಮೇಶ್ವರ್ ಊಟಕ್ಕೆ ಕರೆದಾಗಲೂ ಅವಾಗ್ಲೂ ಆಕ್ಷೇಪ. ಜಾರಕಿಹೊಳಿ ಮಾಡಿದ್ರು ಅದಕ್ಕೂ ಸುದ್ದಿ. ಅಂದರೆ ನಾವೆ