ಗದಗ: ಆರ್‌ಸಿಬಿ ಗೆದ್ದರೆ ನಾವೆಲ್ಲ ಖುಷಿ ಪಡೋಣ: ಲಕ್ಕುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ
Gadag, Gadag | Jun 3, 2025 ಆರ್‌ಸಿಬಿ ನಮ್ಮ ಬೆಂಗಳೂರು ತಂಡ. ಈ ಬಾರಿ ಅವರು ಚೆನ್ನಾಗಿ ಆಡುತ್ತಿದ್ದಾರೆ. ಅವರ ಗೆಲುವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಐಪಿಎಲ್‌ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಗಳಿಸಿದೆ. ಪಂಜಾಬ್ ಒಳ್ಳೆಯ ಆಟವಾಡುತ್ತಿದೆ, ಅವರು ಮುಂಬೈ ವಿರುದ್ಧ ಗೆದ್ದಿದ್ದಾರೆ. ಆದರೆ, ಇದೇ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಕೇವಲ 101 ರನ್‌ಗಳಿಗೆ ಆಲೌಟ್ ಆಗಿತ್ತು. ಆರ್‌ಸಿಬಿ ಗೆದ್ದರೆ ನಾವೆಲ್ಲ ಖುಷಿಪಡೋಣ ಅಂತ ಸಿಎಂ ಹೇಳಿದರು.