ಶಿಕಾರಿಪುರ: ಪಟ್ಟಣದ ಬಸವ ಮಂದಿರದಲ್ಲಿ ಶರಣ ಸಿರಿ ಸಿಂಚನ ಸಂಸ್ಥೆಯಿಂದ ಮಹಿಳಾ ದಿನ ಆಚರಣೆ
ಶಿಕಾರಿಪುರ ಪಟ್ಟಣದ ಬಸವ ಮಂದಿರದಲ್ಲಿ ಸೋಮವಾರ ಶರಣ ಸಿರಿ ಸಿಂಚನ ಸಂಸ್ಥೆಯಿಂದ ಮಹಿಳಾ ದಿನ ಆಚರಣೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವೀರೇಶ್ ಮಾತನಾಡಿ, ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ನಮ್ಮ ಸಂಸ್ಥೆಯಿಂದ ಇಂದು ಮಹಿಳೆಯರಿಗೆ ಗೌರವವನ್ನು ಸಲ್ಲಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಭಾರತ ದೇಶ ಮಹಿಳೆಯರಿಗೆ ಗೌರವವನ್ನು ನೀಡಿಕೊಂಡು ಬಂದಿರುವ ದೇಶವಾಗಿದ್ದು ಭಾರತ ಮಾತೆಯನ್ನು ಹೇಗೆ ಪೂಜಿಸುತ್ತೇವೆ ಹಾಗೆ ಮಹಿಳೆಯರಿಗೂ ಕೂಡ ಗೌರವವನ್ನು ಕೊಡಬೇಕಾಗಿದೆ ಎಂದರು.