ಪಾವಗಡ: ಅಪಘಾತದಲ್ಲಿ ಮೃತಪಟ್ಟ ತಂದೆ-ಮಗನ ಕುಟುಂಬಕ್ಕೆ ಮಾಜಿ ಶಾಸಕ ತಿಮ್ಮರಾಯಪ್ಪ ಭೇಟಿ
ಪಾವಗಡದ ತಿಮ್ಮಮ್ಮನಹಳ್ಳಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ರಾಮಾಂಜಿನಪ್ಪ ಮತ್ತು ಅವರ ಪುತ್ರ ಚಿನ್ನಯ್ಯ ಅವರ ಮನೆಗೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ಜಿ.ವಿ. ಬಲರಾಮ್ ಕೂಡ ಸಹಾಯ ನೀಡಿದರು.